ಹೆಣ್ಣಿನ ಮನಸು ಮತ್ತು ಅವಳ ಮನೋಬಲ |ಹೆಣ್ಣಿನ ಒಳ್ಳೆಯತನವನ್ನು ಅವಳ ದೌರ್ಬಲ್ಯವೆಂದು ಭಾವಿಸಬೇಡಿ.
ತನ್ನ ಕಣ್ಣೀರಿನಲ್ಲೂ ಶಕ್ತಿಯನ್ನು ಕಂಡುಕೊಳ್ಳುವವಳು ಹೆಣ್ಣು!ಈ ಜಗತ್ತಿನಲ್ಲಿ ಕೆಲವು ಶಕ್ತಿಗಳಿವೆ… ಅವು ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಅವುಗಳ ಪ್ರಭಾವ ಇಡೀ ಜಗತ್ತನ್ನೇ ಬದಲಾಯಿಸಬಲ್ಲದು. ಅಂತಹ ಅದ್ಭುತ ಶಕ್ತಿಗಳಲ್ಲಿ ಒಂದು ಹೆಣ್ಣಿನ ಅಂತಃಕರಣ… ಮತ್ತೊಂದು ಅವಳ ಮನೋಬಲ!ಹೆಣ್ಣು ಎಂದರೆ ಕೇವಲ ಒಂದು ಸಂಬಂಧವಲ್ಲ…ಅವಳು ಒಂದು ಭಾವನೆ, ಒಂದು ತ್ಯಾಗ, ಒಂದು ಪ್ರೀತಿ, ಒಂದು ನಂಬಿಕೆ!ಅವಳ ಹೃದಯದಲ್ಲಿ ಸಾವಿರ ನೋವುಗಳಿದ್ದರೂ, ತನ್ನವರ ಮುಖದಲ್ಲಿ ನಗು ಮೂಡಿಸಲು ಪ್ರಯತ್ನಿಸುತ್ತಾಳೆ. ತನ್ನ ಕಣ್ಣಿನಲ್ಲಿ ಕಣ್ಣೀರು ತುಂಬಿದ್ದರೂ, ಬೇರೆಯವರ ಕಣ್ಣೀರನ್ನು ಒರೆಸಲು ಕೈ ಚಾಚುತ್ತಾಳೆ.ಆದರೆ ಒಂದು ಪ್ರಶ್ನೆ…
ಎಲ್ಲರ ನೋವನ್ನು ಅರ್ಥಮಾಡಿಕೊಳ್ಳುವ ಹೆಣ್ಣಿನ ನೋವನ್ನು ಅರ್ಥಮಾಡಿಕೊಳ್ಳುವವರು ಯಾರು?
- ಅವಳು ಮೌನವಾಗಿದ್ದಾಳೆ ಎಂದರೆ ಅವಳಿಗೆ ನೋವಿಲ್ಲ ಎಂದಲ್ಲ.
- ಅವಳು ನಗುತ್ತಿದ್ದಾಳೆ ಎಂದರೆ ಅವಳ ಬದುಕಿನಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ.
- ಅವಳು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾಳೆ ಎಂದರೆ ಅವಳು ದುರ್ಬಲಳು ಎಂದೂ ಅಲ್ಲ.
ಕೆಲವೊಮ್ಮೆ ಅವಳ ಮೌನದ ಹಿಂದೆ ಸಾವಿರ ಮಾತುಗಳಿರುತ್ತವೆ. ಅವಳ ನಗುವಿನ ಹಿಂದೆ ಮುಚ್ಚಿಟ್ಟ ಕಣ್ಣೀರಿರುತ್ತದೆ. ಅವಳ ಹೃದಯದೊಳಗೆ ಯಾರಿಗೂ ಹೇಳಲಾಗದ ನೋವಿರುತ್ತದೆ.ಆದ
ರೂ ಅವಳು ಬದುಕುತ್ತಾಳೆ…ಜೀವಿಸುತ್ತಾಳೆ , ಮತ್ತೆ ಬಿದ್ದು ಮತ್ತೆ ಎದ್ದುನಿಲ್ಲುತ್ತಾಳೆ…ನೋವು ಅನುಭವಿಸುತ್ತಾಳೆ, ಆದರೂ ಯಾರನ್ನು ಪ್ರೀತಿಸುವುದನ್ನು ಮರೆಯುವುದಿಲ್ಲ!ಇದೇ ಹೆಣ್ಣಿನ ಮನಸ ಅಂತಃಕರಣದ ಸೌಂದರ್ಯ!ಅದನ್ನು ಗುರುತಿಸಿ ಹೆಣ್ಣಿನ ಒಳ್ಳೆಯತನವನ್ನು ಅವಳ ದೌರ್ಬಲ್ಯವೆಂದು ಭಾವಿಸಬೇಡಿ.
ರೂ ಅವಳು ಬದುಕುತ್ತಾಳೆ…ಜೀವಿಸುತ್ತಾಳೆ , ಮತ್ತೆ ಬಿದ್ದು ಮತ್ತೆ ಎದ್ದುನಿಲ್ಲುತ್ತಾಳೆ…ನೋವು ಅನುಭವಿಸುತ್ತಾಳೆ, ಆದರೂ ಯಾರನ್ನು ಪ್ರೀತಿಸುವುದನ್ನು ಮರೆಯುವುದಿಲ್ಲ!ಇದೇ ಹೆಣ್ಣಿನ ಮನಸ ಅಂತಃಕರಣದ ಸೌಂದರ್ಯ!ಅದನ್ನು ಗುರುತಿಸಿ ಹೆಣ್ಣಿನ ಒಳ್ಳೆಯತನವನ್ನು ಅವಳ ದೌರ್ಬಲ್ಯವೆಂದು ಭಾವಿಸಬೇಡಿ.
ಅವಳ ಪ್ರೀತಿಯನ್ನು ನಿಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ. ಅವಳ ತಾಳ್ಮೆಯನ್ನು ಪರೀಕ್ಷಿಸುತ್ತಲೇ ಇರಬೇಡಿ. ಏಕೆಂದರೆ ತಾಳ್ಮೆಗೂ ಒಂದು ಮಿತಿಯಿದೆ. ಪ್ರೀತಿಗೂ ಒಂದು ಗೌರವವಿದೆ. ಆತ್ಮಗೌರವಕ್ಕೂ ಒಂದು ಬೆಲೆಯಿದೆ.ಒಂದು ಹೆಣ್ಣು ತನ್ನ ಕುಟುಂಬಕ್ಕಾಗಿ ತನ್ನ ಕನಸುಗಳನ್ನು ಮುಂದೂಡಬಹುದು. ತನ್ನವರ ಸಂತೋಷಕ್ಕಾಗಿ ತನ್ನ ಆಸೆಗಳನ್ನು ತ್ಯಾಗ ಮಾಡಬಹುದು. ಆದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಷ್ಟು ಅವಳು ತನ್ನನ್ನು ತಾನೇ ಮರೆಯಬಾರದು.

